“ಹೊಟ್ಟೆಕಿಚ್ಚಿನ ಕಡಲು”

ತೆರೆಗಳ ಆರ್ಭಟಕೆ ಮನವ ತುಂಬಿ ನಲಿಯುತಿಹಳು..
ನನ್ನವಳನು ವರ್ಣಿಸಲು ನಾ ಹೊಂಚು ಹಾಕಿ..
ಕಡಲೆದೆಯ ಮೇಲೆ ಅವಳಂದವ ಚಿತ್ರಿಸಿ ದೃಷ್ಟಿ ಬೊಟ್ಟಿಡುವಷ್ಟರಲ್ಲಿ
ಹೊಟ್ಟೆಕಿಚ್ಚಿನ ಕಡಲು, ಚಿತ್ರಕ್ಕೆ ತಣ್ಣೀರೆರೆಚುತಿಹುದು.
–ಮಂಜು

Advertisements

“ಮನದ ಕನ್ನಡಿ”

Source: by laurawilliam

ಹೇಳುವರೆಲ್ಲ ಕಣ್ಣುಗಳೆ ಮನಸಿನ ಕನ್ನಡಿ.
ಛೆ.. ಅದೆಲ್ಲಾ ಸುಮ್ಮನೆ ಹೇಳೋ ನಾಣ್ಣುಡಿ..
ನಿಜವಾಗಿದ್ರೆ,
ಸಿಗುತ್ತಿತ್ತೇನೋ ಎಷ್ಟೋ ಮನದ ಹೊಸಿಲ ದಾಟದೆ
ಅಳಿದುಹೋದ ಪ್ರೇಮ ಕಥೆಗೆ ಮುನ್ನುಡಿ..
–ಮಂಜು

“ಮಾರಾಟಕ್ಕಿದೆ..ನನ್ನದೊಂದು ಕನಸು”

bottled_dream_by_arefin03-d7iv012

ನೀಡುವಿರಾ ಭೇಟಿಯ ಮನದ ಮಾರುಕಟ್ಟೆಗೆ..
ಮೋಸವಿರದ ತೂಗು ತಕ್ಕಡಿ ತಟ್ಟೆಯ..
ಪ್ರೀತಿಯ ಪುಡಿಗಾಸಿಗೆ ಬೆಲೆಬಾಳುವ.
ಕೊಂಡು ಕೊಂಡರೆ, ಮನದ ಕದ ತಟ್ಟುವ
ಹಲುವು ರಾತ್ರಿಗಳ ಕಣ್ಣು ತಪ್ಪಿಸಿ ಬೆಳೆದ ಕೂಸು..
ಖರೀದಿಸ ಬನ್ನಿ, ಮಾರಾಟಕ್ಕಿದೆ..ನನ್ನದೊಂದು ಕನಸು.||
— ಮಂಜು

 

“ಮೆಲುದನಿ”

800px_COLOURBOX5628282.jpg

ಕರಗುತಿಹ ನೇಸರ ಸಂಜೆಯ ಹೊತ್ತು..
ಶಶಿಯ ತಂಬೆಲರಕೆ ಮನ ಸೋತು.||
ಕಳೆಯುತ್ತಿರುವಾಗ ನಾ ಸಮಯವ ಬೇಸತ್ತು
ನನ್ನವಳು ನನ್ನೆದೆಗೆ ತಾಗಿ ಕೂತು..
ಕತ್ತನೆತ್ತಿ ಆಡುತ್ತಿರುವ ಮೆಲುದನಿ ಮಾತು||
ತಿಳಿಸಂಜೆ ರಂಗೇರಿದ್ದೇ ಮರೆತುಹೋಯಿತು.
–ಮಂಜು

“ಜಾರಿದ ಕಂಬನಿ”

EvenWeeping

ಗದರಿಸಿದರೆ ತುಂಬಿಕೊಳ್ಳುತಿದ್ದೆ ಈ ಕಂಗಳಲಿ
ಯಾಕೆ ಮರುಭೂಮಿಯ ಮರೀಚಿಕೆಯೆಂತಾದೆ ನೀ
ಬಿಟ್ಟು ಕೊಡದಿರುವೆ ನಾ ಎಲ್ಲರೆದುರು ನಿನ್ನ
ಹಾಗಂತ ಮುನಿಸಿಕೊಂಡು ತೊರೆಯದಿರು ನನ್ನ..ಓ ನನ್ನ ಜಾರಿದ ಕಂಬನಿ

ಏಕಾಂತದಲ್ಲಾದರೂ ಸವರಬೇಕು ನೀ ನನ್ನ ಕೆನ್ನೆಯ
ಮುಂದುವರೆಸಲು ನೋವ ಮರೆಮಾಚಿ ನಗುವ ನಟನೆಯ
ಜೊತೆಗಿರು ಹೇಳುವೆ ನಿಂಗೆ ಗತಿಸಿದ ಘಟನೆಯ
ಅದೇ ನೆಪದಲ್ಲಿ ಮಾಡಿಸುವೆ ವಿಶ್ವ ಪರ್ಯಟನೆ..ಓ ನನ್ನ ಜಾರಿದ ಕಂಬನಿ
–ಮಂಜು

“ಕೌದಿ”

images

ಅವ್ವನ ಹರಿದ ಸೀರೆಗಳಿಂದಾದ ಕೌದಿ.
ಬೆಕ್ಕಂತೆ ನಾ ಬಯಸುವ ಉರಿದುಳಿದ ಬಿಸಿ ಒಲೆಯ ಬೂದಿ..
ಹೊದ್ದು ಮಲಗಿದರೆ ಅವ್ವನ ಬಿಸಿ ಅಪ್ಪುಗೆಯ ಸುಖ..
ಅವಸರದ ಬದುಕನ್ನ ಕೊಂಚವಾದರೂ ಮರೆಯುವೆ ಈ ಮೂಲಕ.
–ಮಂಜು