ಆಕಸ್ಮಿಕ ಕವಿ

 

ಪ್ರೀತಿಯ ಕಾತುರತೆಯಲಿ ಯಾರಾದರಾದರೂ ಆಗಬಲ್ಲರು ಕವಿ
ಯಾರು ಮೆಚ್ಚಿದರು,
ಯಾರೂ ಮೆಚ್ಚದಿದ್ದರೂ ನನ್ನಾಕೆ ಓದಿದರೆ,  ಓದಿ ಪ್ರತ್ಯುತ್ತರಿಸಿದರೆ..
ಆಕಾಶದಲಿ ತೇಲಿದಂತಾಗುವುದು ಈ ಸಣ್ಣ ಹೃದಯದ ಜೀವಿ..!!
— ಮಂಜು

ನಿನ್ನ ಮೊಗ ಕೆಂಪಿಟ್ಟಿದೆ

IMG_20181101_172137-01

 ತಿಳಿ ಸಂಜೆ ಜಾರುತಿಹುದು ಬಾನಿನಲ್ಲಿ..

ರವಿ ದೂರ ಸರಿಯುತ್ತಿರುವನೆಂಬ ಕೋಪವೋ,

ಶಶಿ ಆಗಮನವಾಗುವನೆಂಬ ನಾಚಿಕೆಯೋ…..ನಿನ್ನ ಮೊಗ ಕೆಂಪಿಟ್ಟಿದೆ..

                                                       -–ಮಂಜು

“ನೀನಿರದ ನಾಳೆಗಳು”

IMG_20181124_111004-01

ನೆನೆಸಿಕೊಂಡರೆ ನೀನಿರದ ನನ್ನ ನಾಳೆಗಳು
ಬಂಜರು ಭೂಮಿಯಲಿ ಭಿತ್ತಿಯು ಬೆಳೆಯದ ಪೈರುಗಳು..
ಜೊತಯಲಿ ಕರ ಪಿಡಿದು ನಡೆದ ಆ ದಿನಗಳು..
ನಾಳಿನ ಚಿಂತೆಗೆ ನೆಪವೊಡ್ಡಿ ಉಳಿಯುವ ನೆನಪುಗಳು..
–ಮಂಜು

“ಕಾಫಿ ಡೇನ ಪ್ರೇಮಿಗಳು”

fffff

 ಕಾಫಿ ಕಪ್ ನ ಕೈಯಲ್ಲಿ ಹಿಡಿದು ..
ಕಲ್ಪನೆಯ ಸೂಜಿಯಿಂದ ಭವಿಷ್ಯದ ಕುಲಾವಿಯ ಹೆಣೆಯುತ್ತಿರಲು..
ವಾಸ್ತವದಲ್ಲಿ ಜೊತೆಗಿರುವ ಮಗುವೆಂಬ ಅಮೂಲ್ಯ
ಸಮಯವನ್ನು ವ್ಯರ್ತಗಯ್ಯುತ್ತಿರುವ ನಾಳೆಯ ಪ್ರೇಮಿಗಳು||.
–ಮಂಜು

“ಕಾರಣವಿರದ ಪ್ರೀತಿ”

 

ಕಾರಣ ಕೇಳದಿರು ನಿನ್ನ ಪ್ರೀತಿಸುತ್ತಿರಲು..
ವ್ಯಕ್ತಪಡಿಸಲಾರೆನು ಮನದೊಳಗಿನ ಅಳಲು..||
ಏನ್ಮಾಡಲಿ, ನಾಲಗೆಗೆ ಪ್ರೀತಿಯ ಅರಿವಿಲ್ಲ..
ಹೃದಯಕೆ ಮಾತಾಡಿ ಅನುಭವವಿಲ್ಲ..||
–ಮಂಜು

“ಹಣ?/ ಜನ?”

Credits: https://www.myjewishlearning.com/wp-content/uploads/2003/06/funeral-mourn-death-grave-cemetery-1598x900.jpg

ಮಾನವ ಹಣ ಸಂಪಾದಿಸುವುದರಲ್ಲಿ ಸಂಪನ್ನ
ಮಾನವೀಯತೆಯ ವಿಚಾರದಲ್ಲಿ ಸೇರುವೆ ಕಟುಕರ ಗುಂಪನ್ನ
ಯಾವುದಕ್ಕಾಗಿ ಗಳಿಸುತ್ತಿದ್ದಾನೋ ಈ ಹಣವನ್ನ..
ಜನ ಗಳಿಸುವದ ಮರೆತೆ, ಹೊತ್ತೊಯ್ಯಲು ನಿನ್ನ ಹೆಣವನ್ನ.
–ಮಂಜು

“ಝರಾ ಪ್ರೀತಿ” (in ಜವಾರಿ ಕನ್ನಡ)

ಭೂಮಿ ನೋಡಿ ಮ್ಯಾಲಿನ ಚುಕ್ಕಿ ಬಿಳ್ತಾವಂತ್..
ನೀ ಇನ್ನು ಯೊಚ್ನಿ ಮಾಡಾಕತ್ತಿ ಅಷ್ಟ ದೂರ ನಿಂತ..
ನೀನ್ಯಾವಾಗಾರ ಮಾಡ್ಕೊಂಡ್ ಸ್ವಲ್ಪ್ ಪುರುಸೊತ್ತು..
ನಂಗಾಗಿ ತೊಗೊಂಡ್ ಬಾ ಝರಾ ಪ್ರೀತಿ ಹೊತ್ತ್..
ನೀ ತರ್ಲಿಲ್ಲ ಅಂದ್ರ್ ನಾ ಏನ ತಿರುಗುದಿಲ್ಲ ಗಡ್ಡ ಬಿಟ್ಟ ಅತ್ತಿಂದಿತ್ತ್..
ಯಾಕಂದ್ರ ಬರಗಾಲ ಬಿದ್ದ್ಯತಿ ಕಣ್ಣಿರ್ಗೆ ಒಬ್ನ್ ಇದ್ದಾಗ ಅತ್ತ ಅತ್ತ.
-ಮಂಜು

“ಉಳಿಸಿಕೊಳ್ರೋ ಅವನ್ನ”

In

ನೀವು ಕೊಡು ಆಷ್ಟೋ ಇಷ್ಟ್ ತಿಂದ್ ಉಳಿದಿದ್ದ ಪರಿಹಾರಕ್ಕ್
ಬೇಕಂತ ಸಾಯುದಿಲ್ಲ ನಮ್ಮ್ ರೈತ್ರ್ ..
ಮಳಿ ಕೈ ಕೊಟ್ಟ ಬರಗಾಲ ಬಿದ್ದಾಗ ಕೇಳ್ತಾರ್ ಪರಿಹಾರ.
ಅದ್ಕ, ಸಾಯು ರೈತನ ಕೈ ಹಿಡಿದ ತಪ್ಪಿಸಲಿ ಸರ್ಕಾರ್ ಅವ್ನ ನೇಣಿನ ಹಾರ..
ಇನ್ನಾರ ಸಾಕ್ ಮಾಡ್ಲಿ ನಾ ಅಷ್ಟ ಆವಾ ಇಷ್ಟ ಸಾಲ ಮನ್ನಾ ಮಾಡ್ತೇವಿ ಅನ್ನು ನಕ್ರಾ..
ಸಾಲ ಮಾಡಲಾರದ್ ಫಸಲ ತೆಗ್ಯದ ಒಂದ್ ತುತ್ತು ಉಣ್ಣಾಕ್ ಕೊಡ್ಲಿ ಸಹಕಾರ..
ಹಿಂಗ್ ಸಾಯಕತ್ರ ರೈತ್ರ್ ನಾವು ನೀವು ತಿನ್ನುದಕ್ಕ್ಯಾತಿ ಮಣ್ಣು ಬರಿ ನೀರ.||
-ಮಂಜು

“ಹೊಟ್ಟೆಕಿಚ್ಚಿನ ಕಡಲು”

ತೆರೆಗಳ ಆರ್ಭಟಕೆ ಮನವ ತುಂಬಿ ನಲಿಯುತಿಹಳು..
ನನ್ನವಳನು ವರ್ಣಿಸಲು ನಾ ಹೊಂಚು ಹಾಕಿ..
ಕಡಲೆದೆಯ ಮೇಲೆ ಅವಳಂದವ ಚಿತ್ರಿಸಿ ದೃಷ್ಟಿ ಬೊಟ್ಟಿಡುವಷ್ಟರಲ್ಲಿ
ಹೊಟ್ಟೆಕಿಚ್ಚಿನ ಕಡಲು, ಚಿತ್ರಕ್ಕೆ ತಣ್ಣೀರೆರೆಚುತಿಹುದು.
–ಮಂಜು

“ಮನದ ಕನ್ನಡಿ”

Source: by laurawilliam

ಹೇಳುವರೆಲ್ಲ ಕಣ್ಣುಗಳೆ ಮನಸಿನ ಕನ್ನಡಿ.
ಛೆ.. ಅದೆಲ್ಲಾ ಸುಮ್ಮನೆ ಹೇಳೋ ನಾಣ್ಣುಡಿ..
ನಿಜವಾಗಿದ್ರೆ,
ಸಿಗುತ್ತಿತ್ತೇನೋ ಎಷ್ಟೋ ಮನದ ಹೊಸಿಲ ದಾಟದೆ
ಅಳಿದುಹೋದ ಪ್ರೇಮ ಕಥೆಗೆ ಮುನ್ನುಡಿ..
–ಮಂಜು

“ಮಾರಾಟಕ್ಕಿದೆ..ನನ್ನದೊಂದು ಕನಸು”

bottled_dream_by_arefin03-d7iv012

ನೀಡುವಿರಾ ಭೇಟಿಯ ಮನದ ಮಾರುಕಟ್ಟೆಗೆ..
ಮೋಸವಿರದ ತೂಗು ತಕ್ಕಡಿ ತಟ್ಟೆಯ..
ಪ್ರೀತಿಯ ಪುಡಿಗಾಸಿಗೆ ಬೆಲೆಬಾಳುವ.
ಕೊಂಡು ಕೊಂಡರೆ, ಮನದ ಕದ ತಟ್ಟುವ
ಹಲುವು ರಾತ್ರಿಗಳ ಕಣ್ಣು ತಪ್ಪಿಸಿ ಬೆಳೆದ ಕೂಸು..
ಖರೀದಿಸ ಬನ್ನಿ, ಮಾರಾಟಕ್ಕಿದೆ..ನನ್ನದೊಂದು ಕನಸು.||
— ಮಂಜು

 

“ಮೆಲುದನಿ”

800px_COLOURBOX5628282.jpg

ಕರಗುತಿಹ ನೇಸರ ಸಂಜೆಯ ಹೊತ್ತು..
ಶಶಿಯ ತಂಬೆಲರಕೆ ಮನ ಸೋತು.||
ಕಳೆಯುತ್ತಿರುವಾಗ ನಾ ಸಮಯವ ಬೇಸತ್ತು
ನನ್ನವಳು ನನ್ನೆದೆಗೆ ತಾಗಿ ಕೂತು..
ಕತ್ತನೆತ್ತಿ ಆಡುತ್ತಿರುವ ಮೆಲುದನಿ ಮಾತು||
ತಿಳಿಸಂಜೆ ರಂಗೇರಿದ್ದೇ ಮರೆತುಹೋಯಿತು.
–ಮಂಜು

“ಜಾರಿದ ಕಂಬನಿ”

EvenWeeping

ಗದರಿಸಿದರೆ ತುಂಬಿಕೊಳ್ಳುತಿದ್ದೆ ಈ ಕಂಗಳಲಿ
ಯಾಕೆ ಮರುಭೂಮಿಯ ಮರೀಚಿಕೆಯೆಂತಾದೆ ನೀ
ಬಿಟ್ಟು ಕೊಡದಿರುವೆ ನಾ ಎಲ್ಲರೆದುರು ನಿನ್ನ
ಹಾಗಂತ ಮುನಿಸಿಕೊಂಡು ತೊರೆಯದಿರು ನನ್ನ..ಓ ನನ್ನ ಜಾರಿದ ಕಂಬನಿ

ಏಕಾಂತದಲ್ಲಾದರೂ ಸವರಬೇಕು ನೀ ನನ್ನ ಕೆನ್ನೆಯ
ಮುಂದುವರೆಸಲು ನೋವ ಮರೆಮಾಚಿ ನಗುವ ನಟನೆಯ
ಜೊತೆಗಿರು ಹೇಳುವೆ ನಿಂಗೆ ಗತಿಸಿದ ಘಟನೆಯ
ಅದೇ ನೆಪದಲ್ಲಿ ಮಾಡಿಸುವೆ ವಿಶ್ವ ಪರ್ಯಟನೆ..ಓ ನನ್ನ ಜಾರಿದ ಕಂಬನಿ
–ಮಂಜು

“ಕೌದಿ”

images

ಅವ್ವನ ಹರಿದ ಸೀರೆಗಳಿಂದಾದ ಕೌದಿ.
ಬೆಕ್ಕಂತೆ ನಾ ಬಯಸುವ ಉರಿದುಳಿದ ಬಿಸಿ ಒಲೆಯ ಬೂದಿ..
ಹೊದ್ದು ಮಲಗಿದರೆ ಅವ್ವನ ಬಿಸಿ ಅಪ್ಪುಗೆಯ ಸುಖ..
ಅವಸರದ ಬದುಕನ್ನ ಕೊಂಚವಾದರೂ ಮರೆಯುವೆ ಈ ಮೂಲಕ.
–ಮಂಜು

“ಮೂರ್ಛೆ ಹೋದ ಹೃದಯ”

329740067_372753c222_o

ತುಸು ಪ್ರೀತಿಯ ಹುಸಿ ಉತ್ತರಕೆ
ಹೃದಯ ಹೋಯ್ತು ಮೂರ್ಛೆ..
ನಡೆಯಲಿಲ್ಲ ಯಾಕೆ, ಏನಾಯಿತೆಂಬ ಚರ್ಚೆ..
ಬದಲಾಗಿ,
ನಡೆದಂತಾಯಿತು ನನ್ನೀ ಪ್ರೀತಿಯ ಪರಿಶೀಲನೆ.
ಸುಕಾಂತ್ಯವಿಲ್ಲವೆಂದು ಅರಿತರೂ, ನೀಡಲಾಗಿದೆ ಈ ಪ್ರೇಮ ಕಥೆಗೆ ಚಾಲನೆ.
— ಮಂಜು

“ಪರಿವೆ”

mg22229645.000-1_800

ಆಡದೆ ಉಳಿದಿಯ ಮಾತು ನೂರಿವೆ .
ನೀನಿರುವ ಊರಿನ ದಾರಿ ನಾ ಅರಿವೆ..
ಈ ಪ್ರೀತಿ ಹೋರಾಟದಲ್ಲಿ ನನಗಿಲ್ಲ ಯಾವ ಪರಿವೆ.
ಗೆದ್ದರೆ ನಾ ಬೇಗ ಬಂದು ನಿನ್ನ ಸೇರುವೆ..
–ಮಂಜು

“ಓಲೆ”

world-post-day

ರವಾನಿಸು ನನಗೊಂದು ಓಲೆ..
ಬರೆದು ನಿನ್ನ ಕನಸುಗಳ ಮಾಲೆ.
ಈಡೇರಿಸುವ ಪ್ರಯತ್ನ ನನ್ನದು ನಲ್ಲೆ..
ಸುಮ್ಮನೆ ಜೊತೆಯಾಗಿ ನನ್ನೀ ಜೀವನದಲ್ಲೊಮ್ಮೆ ನಿಲ್ಲೆ.
–ಮಂಜು

“ಮನದ ಬಿಡಾರ”

images

ಹೋಗುತ್ತಿರುವೆ ನನ್ನಿಂದ ದೂರ..
ಹೊತ್ತುತಿರುಗುತ್ತಿರುವೆ ಈ ಪ್ರೀತಿಯ ಬಾರ.
ಮೌನ ಮುರಿದು ಮಾಡು ಈ ಹೃದಯವ ಹಗುರ..
ನಿನಗಾಗಿ ಕಾಯುತ್ತಿರುವೆ ಹಾಕಿ ಮನದಲ್ಲಿ ಬಿಡಾರ..
ಇನ್ನಾದರೂ ತೋರು ಕೊಂಚ ಉದಾರ..
ಕಂಡಿಡಿವೆನು ಈ ಕಗ್ಗಂಟಿನ ಪ್ರೀತಿಗೆ ಪರಿಹಾರ.
–ಮಂಜು

“ಸಂಘರ್ಷ”

head-vs-heart

ಮನಸ್ಸು ಮೆದುಳಿನ ಮಧ್ಯ.
ನಡೆಯುತ್ತಿರುವ ಸಂಘರ್ಷ..
ಇತ್ತ ಮೆದುಳಿಗಿಲ್ಲ ಹರ್ಷ..
ಅತ್ತ ಮನ ಬಯಸಿದೆ ನಿನ್ನುಸಿರಿನ ಸ್ಪರ್ಶ..
ಇದೆಲ್ಲದರ ಮಧ್ಯ ಇನ್ನೆಲ್ಲಿದೆ ಈ ಜೀವಕೆ ಹೊಸ ವರ್ಷ..
–ಮಂಜು

ಪ್ರೀತಿಯ ಬಳುವಳಿ

sercedoserca

ಅಂತರಾಳದಲಿ ದಿನನಿತ್ಯ ಚಳುವಳಿ..
ಕೊಡಬಾರದೆ ನಿನ್ನ ಪ್ರೀತಿಯ ಬಳುವಳಿ.
ನೀ ದೂರಾದರೆ ಈ ಜೀವಕೆ ಚೆಲುವಲ್ಲಿ..
ಕೊನೆಗೊಮ್ಮೆ ಬಂದು ನೆಲೆಸು ಈ ಹೃದಯ ಸ್ವರ್ಗದಲ್ಲಿ.
–ಮಂಜು

“ಅಪ್ಪುವ ಮಳೆಹನಿ”

maxresdefault

ಮೋಡಕವಿದ ವಾತಾವರಣ
ತೋಚುತ್ತಿಲ್ಲ ಯಾವ ಹೊಸಗವನ
ಕರೆಯುತ್ತಿದೆ ಖಾಲಿರೋಡ ಕೈಚಾಚಿ.
ಬಂದಪ್ಪುವೆನು ತಾಳು ಬರಲಿ ನನ್ನೊಡನೆ,
ಮಳೆಹನಿಗಳು ಎದೆಗವಚಿ…
–ಮಂಜು

“ಕಾತುರ”

images (2)

ತಿಳಿ ತಂಪಲ್ಲಿ ಮನಕೆ ಯಾಕೋ ಬೇಸರ..
ಗುನುಗುತಿಹೆ ಪದೇ ಪದೇ ನಿನ್ನ ಹೆಸರ.
ಇರಬೇಕೇನೋ ನಿನ್ನ ನೋಡುವ ಕಾತುರ..
–ಮಂಜು

“ಇಬ್ಬನಿಯ ನೀ ತಬ್ಬಿ”

 

images (1).jpg

ಮುಂಜಾನೆಯ ಹನಿ ಇಬ್ಬನಿ
ಚಿಗುರೆಲೆಗಳ ತಬ್ಬಿ ನೀ
ಆನಂದ ಬಾಷ್ಪವ ಸುರಿಸಿ
ಬಂದ ಕಷ್ಟಗಳ ಓರೆಗೆ ಸರಿಸಿ
ರವಿಯ ಕಿರಣಗಳ ತಮ್ಮೆಡೆಗೆ ಸ್ವಾಗತಿಸಿ
ಹೊಳೆಯುತ್ತಿವೆ ಅಪ್ಪಟ ವಜ್ರವನ್ನೇ ನಾಚಿಸಿ.
–ಮಂಜು

“ಸಮಯ”

 

images.jpg

ಕಳೆದುಹೋಗಲು ಆತುರ ನಿನಗೆ
ಅವಳು ಸನಿಹವಿದ್ದಾಗ..
ಆದರೆ ಜಿಪುಣತನವೇಕೆ ಅವಳು ದೂರವಿದ್ದಾಗ..
ಸ್ವಲ್ಪ ದಯಮಾಡಿ ಓಡಿ
ಕಲ್ಪಿಸು ಅವಳು ಖುಷಿಯಾಗಿರುವ ಕ್ಷಣಗಳ
ಕಾಣುವ ಅವಕಾಶ
ಇಲ್ಲವಾದರೆ ಕರುಣಿಸು ಸನಿಹವಿದ್ದ ನೆನಪುಗಳ ಮಹಲ್ಗೆ ಪ್ರವೇಶ.
–ಮಂಜು

“ಹಲೋ”

call-center-phone-etiquette

ಮಾತನಾಡಲು ಹವಣಿಸುತ್ತಿರುವ ತುಟಿಗಳು
ನಿನ್ನ ಸಿಹಿನುಡಿಯ ಕೇಳಲು ಕಾದಿವೆ ಕಿವಿ ತಮಟೆಗಳು.
ಸಹಿಸಲಾರದ ಮೌನವೇಕೆ ತರುಣೇ.
ಬಡಿಸಬಾರದೇ ಮಾತುಗಳ ಔತಣ ತೋರಿ ಕರುಣೆ
ಫೋನ್ ರಿಂಗಣಿಸಿ ಅನಬಾರದೇ ಒಮ್ಮೆ ಹಲೋ
ಮರುಕ್ಷಣವೇ,
ಮನದ ಮರಿಭೂಮಿಗೆ ಮಳೆ ಹನಿ ಬಿಳಬಹುದೇನೋ ಕೇಳೋ.
–ಮಂಜು

“ವಯಸ್ಸಿನ ಆಯಸ್ಸು”

download

ಅರಿತೆನಾ ವಯಸ್ಸು ಆಯಸ್ಸಿನ ವ್ಯತ್ಯಾಸ
ಇದ್ದರೆ ವಯಸ್ಸೆಷ್ಟು ಎನ್ನುವರು
ಹೋದರೆ ಆಯಸ್ಸಿಷ್ಟೇ ಎನ್ನುವರು..
ವಯಸ್ಸು ಹೆಚ್ಚಾದಂತೆ
ಆಯಸ್ಸು ಕಡಿಮೆಯಾಗುವುದು
ಏನಿದು ತೊಡಕು ಸಂಬಂಧ….???
–ಮಂಜು

“ನೆನಪು”

Memory

ಅಳಿಸಲಾಗದೆ ಸೋತಿಹ ಹೃದಯ..
ಅಳಿದರೂ ತೊರೆಯದಿ ಮನವ..
ಸ್ಮೃತಿಯ ಕೋಣೆಗಳಲ್ಲಿ ಅಡಗಿಹ..
ಕಳೆದ ಕ್ಷಣಗಳು ಮೂಡಿಸಿದ ಛಾಪುವೆ…ನೆನಪು..
— ಮಂಜು

“ಅನುಮಾನ”

doubt

ಅವಳಿಗೇಳುವ ಮಾತುಗಳಾದವು ಕವನ..
ಕಾರಣ, ನನ್ನಲ್ಲಿ ಅವಳ ಪ್ರೀತಿಯ ಸಂಚಲನ..
ಯಾಕೆ ದೂರ ಮಾಡುತಿದೆಯೋ ಅವಳ ಮನ..
ಇರಬಹುದೇನೋ ನನ್ನ ಪ್ರೀತಿ ಮೇಲೆ ಅನುಮಾನ..
ಕಾಯುವೆ, ಎಂದಾದರಾಗಲಿ ಆಕೆಯ ಆಗಮನ.
–ಮಂಜು